+91 9876543210
slv.durga.temple@gmail.com

ವಾರ್ಷಿಕ ದೀಪಾರಾಧನೆ , ಕೆರೆ ದೀಪ , ಪುಷ್ಪ ರಥೋತ್ಸವ

11 Nov 2025 — 11 Nov 2025

Event Flyer

Event Details

Description
ಕಿರುತಿರುಪತಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ , ದುರ್ಗ , ಕಾರ್ಕಳ , ಉಡುಪಿ ಜಿಲ್ಲೆ , 576117 www.kiruthirupathi.org ಆತ್ಮೀಯ ಭಗವದ್ಭಕ್ತರೇ, ಸ್ವಸ್ತಿ ಶ್ರೀ ವಿಶ್ವಾವಸು ನಾಮ ಸಂವತ್ಸರದ ಕಾರ್ತಿಕ ಬಹುಳ ಸಪ್ತಮಿ ತಾ|| 11-11-2025 ನೇ ಮಂಗಳವಾರದಂದು ವಾರ್ಷಿಕ ದೀಪಾರಾಧನೆ , ಕೆರೆ ದೀಪ , ಪುಷ್ಪ ರಥೋತ್ಸವ ನಡೆಯಲಿರುವುದು. ತಾವು ಸಕುಟುಂಬ ಇಷ್ಟಮಿತ್ರರೊಡನೆ ಆಗಮಿಸಿ, ಎಲ್ಲಾ ಧಾರ್ಮಿಕ ಹಾಗೂ ಭಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ತನು-ಮನ-ಧನಗಳಿಂದ ಸಹಕರಿಸಿ , ಶ್ರೀದೇವರ ಗಂಧ ಪ್ರಸಾದ ಸ್ವೀಕರಿಸಿ, ಶ್ರೀದೇವರ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಯಪೂರ್ವಕವಾಗಿ ಆಮಂತ್ರಿಸುತ್ತೇವೆ. ಬೆಳಗ್ಗೆ 9:00 ರಿಂದ ದೇವತಾ ಪ್ರಾರ್ಥನೆ, ಗಣಪತಿ ಪೂಜೆ, ಪುಣ್ಯಾಹ, ಧಾತ್ರಿ ಪೂಜನ , ಮಹಾಪೂಜೆ, ಬೆಳಗ್ಗೆ 11.00 ರಿಂದ ರಾಜ ರಾಜೇಶ್ವರ ಭಜನಾ ಮಂಡಳಿ ಕುಂಜಿಬೆಟ್ಟು, ಉಡುಪಿ ಇವರಿಂದ ಭಜನಾ ನಾಮ ಸಂಕೀರ್ತನೆ ಮಧ್ಯಾಹ್ನ 12.30 ಗೆ ಮಹಾಮಂಗಳಾರತಿ ಮಧ್ಯಾಹ್ನ 1.00 ಗೆ ಮಹಾ ಅನ್ನಸಂತರ್ಪಣೆ . ಸೇವಾಕರ್ತರು : ಶ್ರೀಮತಿ ಮತ್ತು ಶ್ರೀ ಶಂಕರ ಭಟ್ ವೇಳಣ್ಕರ್ ಮತ್ತು ಮಕ್ಕಳು, ಶೆಟ್ಟಿಬೆಟ್ಟು ; ಶ್ರೀಮತಿ ಮತ್ತು ಶ್ರೀ ಶ್ರೀಕರ ಮರಾಠೆ ಮತ್ತು ಮಕ್ಕಳು, ಬೊಂಬೆತಡ್ಕ ಸಾಯಂಕಾಲ 6:30 ಯಿಂದ ಹರಿಕಥೆ : ಹರಿದಾಸರು : ಅನಂತಪದ್ಮನಾಭ ಭಟ್, ಕಾರ್ಕಳ. ಪ್ರಸಂಗ : ಶ್ರೀನಿವಾಸ ಕಲ್ಯಾಣ ಹಾರ್ಮೋನಿಯಂ : ಶ್ರೀ ರಮೇಶ್ ಹೆಬ್ಬಾರ್, ಮಂಗಳೂರು ತಬ್ಲಾ : ಶ್ರೀ ಪ್ರದೀಪ್ ಉಪಾಧ್ಯಾಯ, ಕಾರ್ಕಳ ಸಾಯಂಕಾಲ 8.30 ರಿಂದ ಮಹಾಪೂಜೆ, ಕೆರೆ ದೀಪ, ಪಾಲಕಿ ಉತ್ಸವ, ಪುಷ್ಪ ರಥೋತ್ಸವ, ವಸಂತಪೂಜೆ

Time: 12:00 PM

From: 11 Nov 2025

To: 11 Nov 2025

Organised by: Bramhananda

Durga, Karkala Taluk, Udupi District, Karnataka State, India 576117